ನಾನಾರ್ಥ
ನಾನಾರ್ಥಒಂದು ಪದಕ್ಕೆ ಇರುವ ಭಿನ್ನ ಭಿನ್ನ ಅರ್ಥಗಳನ್ನು ನಾನಾರ್ಥಗಳು ಎಂದು ಕರೆಯುತ್ತಾರೆ. | |
ಅಡಿ | ಪಾದ , ಅಳತೆ, ಕೆಳಗೆ |
ಅರಸು | ಹುಡುಕು , ರಾಜ , |
ಅಲೆ | ತೆರೆ, ಸುತ್ತಾಟ |
ಆಳು | ಸೇವಕ , ವೀರ , ಆಳುವಿಕೆ |
ಉಡಿ | ಮಡಿಲು , ಪುಡಿಪುಡಿ |
ಊರು | ತೊಡೆ, ಗ್ರಾಮ , ದೃಢತೆ |
ಎರಗು | ಮೇಲೆ ಬೀಳು , ನಮಿಸು. |
ಒರಗು | ಆಸರೆಪಡೆ, ಸತ್ತ, ಮಲಗು |
ಕರ | ತೆರಿಗೆ, ಸುಂಕು, ಕೈ |
ಕರೆ | ಆಹ್ವಾನ, ಕೂಗು, ಹಾಲು ಹಿಂಡು. ಕಲೆ |
ಕರ್ಣ | ರಾಧೇಯ , ಕಿವಿ |
ಕಲ್ಯಾಣ | ಮದುವೆ ,ಕ್ಷೇಮ, |
ಕಾಡು | ತೊಂದರೆಕೊಡು , ಅರಣ್ಯ |
ಕಾರು | ಮಳೆ,ಹೊರಹಾಕು(ವಾಂತಿಮಾಡು) , ವಾಹನ |
ಕಾಲ | ಸಮಯ , ಯಮ |
ಕುಡಿ | ಸೇವಿಸು , ಚಿಗುರು |
ಕಾಲು | ದೇಹದ ಭಾಗ , ನಾಲ್ಕನೆ ಒಂದು ಭಾಗ |
ಕೂಡಿ | ಕುಳಿತುಕೊಳ್ಳಿ, ಸೇರಿಸಿ |
ಕೊಬ್ಬು | ನೆಣ ,ಅಹಂಕಾರ |
ಗತಿ | ಚಲನೆ , ಮೋಕ್ಷ |
ಗುಡಿ | ಬಾವುಟ , ಮಂದಿರ |
ತಾಳಿ | ಸ್ವಲ್ಪ ನಿಧಾನಿಸು ,ಮಾಂಗಲ್ಯಸರ |
ತೊಡೆ | ನಿವಾರಿಸು , ಶರೀರದಲ್ಲಿನ ಒಂದು ಭಾಗ, ಕಾಲಿನ ಮೇಲ್ಬಾಗ. |
ದೊರೆ | ಸಿಗುವುದು, ಅರಸ. ಲಭಿಸು, |
ದಳ | ಹೂವಿನ ಪಕಳೆ, ಸೈನ್ಯ. |
ನಗ | ಆಭರಣ , ಪರ್ವತ. |
ನರ | ಮನುಷ್ಯ, ರಕ್ತನಾಳ. |
ಪಡೆ | ಸೈನ್ಯ , ಸ್ವೀಕರಿಸು. |
ಪಾಷಾಣ | ಕಲ್ಲು , ವಿಷ |
ಮತ | ಧಾರ್ಮಿಕ ಗುಂಪು , ವೋಟ್ |
ನಡು | ಮಧ್ಯೆ , ಸೊಂಟ |
ನೆರೆ | ಪ್ರವಾಹ , ಬಿಳಿಕೂದಲು |
ಬಗೆ | ಸೀಳು , ವಿಧ |
ಬೇಡ | ಬೇಟೆಗಾರ, ತಿರಸ್ಕಾರ |
ಶಿಖಿ | ತಲೆಯಮೇಲಿನ ಕೂದಲು, ಬೆಂಕಿ |
ಸುಳಿ | ನೀರಿನಸುತ್ತುವಿಕೆ, ಹತ್ತಿರ ಓಡಾಡು, ಗಿಡದ ತುದಿಯಭಾಗ |
ಹರಿ | ಸಿಂಹ, ವಿಷ್ಣು, ಕುದುರೆ,ಇಂದ್ರ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ