ಅಸೈನ್ಮೆಂಟ್ 9
ಅಸೈನ್ಮೆಂಟ್ —9
ಶಾಲೆ ಹೆಸರು
ಶ್ರೀಮತಿ ದೇವೀರಮ್ಮ ಕುರುವೆತ್ತಪ್ಪ ಪ್ರೌಢ ಶಾಲೆ ಅಣಜಿ ದಾವಣಗೆರೆ. ಉತ್ತರ ವಲಯ
ಬೋಧಿಸುವ ವಿಷಯ :–ಕನ್ನಡ ಪ್ರಥಮ ಭಾಷೆ
ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ ಲೇಖನ
ಕಲಿಕೆ ಒಂದು ನಿರಂತರ ಪ್ರಕ್ರಿಯೆಯಾಗಿದೆ.ಶಿಕ್ಷಕರ ಸೇವಾ ಪೂರ್ವ ಹಾಗೂ ಸೇವಾನಿರತ ಶಿಕ್ಷಣ ತರಬೇತಿ ಮತ್ತು ಕೆಲಸ ನಿರ್ವಹಣೆಯ ಪರಿಸ್ಥಿತಿ ಹಾಗೂ ವಸ್ತುಸ್ಥಿತಿ ಇತ್ಯಾದಿ ವಿಷಯಗಳು ಶಿಕ್ಷಣದ ಒಟ್ಟು ಗುಣಾತ್ಮಕತೆಯ ಮೇಲೆ ಪ್ರಭಾವ ಬೀರುತ್ತದೆ.ಇಂದು ಹಲವಾರು ಅಡೆತಡೆಗಳು ಮತ್ತು ಅನಾನುಕೂಲಗಳ ಮದ್ಯ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯ ಜ್ಞಾನ ಮತ್ತು ಕೌಶಲಗಳನ್ನು ವೃದ್ದಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಸಿದ್ಧನಾಗುವದು ಸವಾಲಾಗಿದೆ.
ಕಲಿಕೆಯಲ್ಲಿ ತೀವ್ರಗತಿಯಲ್ಲಿ ಬದಲಾವಣೆಗಳನ್ನು ತರವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಪಡುತ್ತಾ ತೀವ್ರ ಆರ್ಥಿಕ ಸಂಪನ್ಮೂಲದ ಕೃಢೀಕರಿಸುತ್ತದೆ. ಇತ್ತೀಚಿಗೆ ಶಿಕ್ಷಕರಿಗೆ ನೀಡಿದ TALP ತರಬೇತಿ ಶೈಕ್ಷಣಿಕವಾಗಿ ಶಿಕ್ಷಕರು ತಂತ್ರಜ್ಞಾನ ಬಳಸಿ ಬೋಧನೆಯನ್ನು ಆಕರ್ಷಣೆಯಗೊಳಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಹಾಯವಾಗಿದೆ.
ಇಂದು ದೇಶವನ್ನು ಬಾಧಿಸುತ್ತಿರುವ ಕೊವಿಡ್ 19 ಸಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುವದು ಸವಾಲಾಗಿದೆ.ಈ ಕೆಳಕಂಡ ವಿಧಾನಗಳು ಸಹಾಯವಾಗಬಹುದು.
* ತಂತ್ರಜ್ಞಾನಾಧಾರಿತ ಶಿಕ್ಷಣ :- ಕಂಪ್ಯೂಟರ್ ಆಧಾರಿತ ಶಿಕ್ಷಣ ಪಡೆಯುವದರ ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡು ಬೋಧನೆಗೆ ತೊಡಗುವದು.
* ಆನ್ಲೈನ್ ತರಬೇತಿ :- ಇಲಾಖೆಯ ನಡೆಸುವ ಆನ್ಲೈನ್ ತರಬೇತಿಯನ್ನು ಪಡೆದು ತಮ್ಮ ಜ್ಞಾನವನ್ನು ವೃದ್ದಿಸಿಕೊಂಳ್ಳುವದು.
* ಶೈಕ್ಷಣಿಕ ಆಪ್ ಗಳ ಬಳಕೆ :- ಯೂಟ್ಯೂಬ್. ದೀಕ್ಷಾ, ವಿದ್ವತ್ ಮುಂತಾದ ಆನ್ಲೈನ್ ನಲ್ಲಿ ಲಭ್ಯ ವಿರುವ ಹಲವಾರು ವಿಷಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಕಾರ್ಯ ಕ್ರಮಗಳನ್ನು ವೀಕ್ಷಿಸಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳ ಬಹುದು.
* ಪಾಠೋಪಕರಣ :- ಶಾಲೆಯಲ್ಲಿ ಬೋಧನೆ ಸಮಯದಲ್ಲಿ ಮಕ್ಕಳಿಗೆ ನೈಜ ಅನುಭವ ನೀಡಲು ಬೋಧನೋಪಕರಣ ತಯಾರಿ ಇಟ್ಟು ಕೊಳ್ಳುವದು.
ಟಿ.ವಿ.ವೀಕ್ಷಣೆ :- ದೂರದರ್ಶನದಲ್ಲಿ ಪ್ರಸಾರವಾಗುವ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಕಾರ್ಯಕ್ರಮ ಗಳನ್ನು ವೀಕ್ಷಿಸಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳ ಬಹುದು.
* ಆಕಾರ ಗ್ರಂಥಗಳು :- ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಆಕಾರ ಗ್ರಂಥಗಳನ್ನು ಓದುವುದರ ಮೂಲಕ ವೃತ್ತಿ ನೈಪುಣ್ಯತೆ ಬೆಳಸಿಕೋಳ್ಳ ಬಹುದು.
* ಸಾಧಕರೊಂದಿಗೆ ಸಂವಾದ :- ಜಿಲ್ಲಾ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಣ ತಜ್ಞರನ್ನ ಸಂಪರ್ಕಿಸಿ ಜ್ಞಾನವನ್ನು ಹೆಚ್ಚುಸಿಕೊಳ್ಳುವದು.
* ಮಕ್ಕಳೊಂದಿಗೆ ನಿರಂತರ ಸಂಪರ್ಕ :- ವಿದ್ಯಾರ್ಥಿಗಳೊಂದಿಗೆ ನಿರಂತರ ಸಂವಾದದಿಂದ ಕಲಿಕಾ ಸಮಸ್ಯೆಗಳಗೆ ಸೂಕ್ತ ಉತ್ತರ ತಿಳಿಸುತ್ತಾ ಮಕ್ಕಳ ಮತ್ತು ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬಹುದಾಗಿದೆ.
ಹಿಗೆ ಹಲವಾರು ಚಟುವಟಿಕೆ ಅನುಸರಿಸುವದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯರಾಗಿ ತಮ್ಮ ಜ್ಞಾನವನ್ನು ಹೆಚ್ಚಸಿ ಕೊಂಡು ಗುಣಾತ್ಮಕ ಶಿಕ್ಷಣ ನೀಡಬಹುದು.
*******
ಲಿಂಗರಾಜ. ಪಿ ರುದ್ರಪ್ಪ ಡಿ ಜಿ
ಶಿಕ್ಷಕರ ಸಹಿ ಮುಖ್ಯೋಪಾಧ್ಯಾಯರ ಸಹಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ